ಮುಹರಮ್' ಅಥವಾ 'ಮುಹರಂ-ಉಲ್-ಹರಂ... ಎಂಬ ಪವಿತ್ರ ತಿಂಗಳು - ಯಾಕೆ ಮತ್ತು ಹೇಗೆ?
✍ - ಎಂ.ಕೆ. ಮೇತ್ರಿ, ವಕೀಲರು.
ಮೊಹರಂ ಯಾವಾಗ?
ಕ್ರಿ.ಶ. 19ನೇ ಏಪ್ರಿಲ್ 622 ರಂದು ಮೊದಲಬಾರಿಗೆ ಹಿಜ್ರಿ ಎಂಬ ಹೊಸ ಇಸ್ಲಾಮಿನ ಶಕೆ ಶುರುವಾಯ್ತು ಹಾಗಾಗಿ ಇಸ್ವಿ 622 ಮೊಟ್ಟ ಮೊದಲ ಇಸ್ಲಾಮಿಕ್ ವರ್ಷ ಎಂದು ಗುರುತಿಸಲ್ಪಟ್ಟಿದೆ. ಈ ತಿಂಗಳನ್ನು ಮುಸ್ಲಿಮರು 'ಮುಹರಮ್' ಅಥವಾ 'ಮುಹರಂ-ಉಲ್-ಹರಂ' ಎಂದೂ ಕರೆಯುತ್ತಾರೆ, ಇದು ಹಿಜ್ರಿ ಕ್ಯಾಲೆಂಡರ್‌ನ ಮೊದಲ ತಿಂಗಳು ಆಗಿದ್ದರಿಂದ ಇಸ್ಲಾಮಿಕ್ ವರ್ಷಾರಂಭವನ್ನು ಸೂಚಿಸುತ್ತದೆ. ಇಸ್ಲಾಮಿಕ್ ಕ್ಯಾಲೆಂಡರಿನ ೧೨ ತಿಂಗಳುಗಳ ಪೈಕಿ ಇದು ಅಲ್ಲಾಹನ ಹೆಸರನ್ನು ಒಳಗೊಂಡ ಏಕೈಕ ತಿಂಗಳು ಎಂದರೆ ತಪ್ಪಾಗದು. ಪ್ರವಾದಿ ಮುಹಮ್ಮದ್ (ಸ) ಇದನ್ನು 'ಅಲ್ಲಾಹನ ಪವಿತ್ರ ತಿಂಗಳು' ಎಂದು ಉಲ್ಲೇಖಿಸಿದ್ದಾರೆ ಮತ್ತು ಇದನ್ನು ಅತ್ಯಂತ ಕೃಪಾಪೂರರ್ಣ ತಿಂಗಳು ಎಂದಿದ್ದಾರೆ.
ಇಸ್ಲಾಮಿಕ್ ನಂಬಿಕೆಯ ನಾಲ್ಕು ಪವಿತ್ರ ತಿಂಗಳುಗಳಲ್ಲಿ ಇದು ಒಂದಾಗಿದೆ, ಇದರ ಪ್ರಾಮುಖ್ಯತೆಯನ್ನು ಅದರ ಹೆಸರಿನಿಂದಲೆ ಸೂಚಿಸಲಾಗುತ್ತದೆ. 'ಮುಹರ್ರಂ' ಪದದ ಅಕ್ಷರಶಃ ಅರ್ಥ 'ನಿಷೇಧಿತ' - ಅಂದರೆ ಅದು ಎಷ್ಟು ಪವಿತ್ರವಾಗಿದೆಯೆಂದರೆ, ಅದರ ಸಮಯದಲ್ಲಿ ಕೆಲವು ಕ್ರಿಯೆಗಳನ್ನು ನಿಷೇಧಿಸಲಾಗಿದೆ, ಏಕೆಂದರೆ ಅವುಗಳು ಅದರ ಪವಿತ್ರತೆಯನ್ನು ಉಲ್ಲಂಘಿಸುತ್ತವೆ. ಮೊಹರಂ ತಿಂಗಳು ಮತ್ತು ಅಲ್ಲಾನ ಮನೆ (ಅಲ್-ಮಸ್ಜಿದ್ ಅಲ್-ಹರಾಮ್) ಎರಡೂ ಒಂದೇ ಅರೇಬಿಕ್ ಮೂಲ ಪದದಿಂದ ಅವುಗಳ ಹೆಸರುಗಳನ್ನು ಪಡೆದಿವೆ; ಇವೆರಡೂ ಪವಿತ್ರ ಸ್ಥಳಗಳಾಗಿದ್ದು, ಇಲ್ಲಿ ಮಾಡಲ್ಪಡುವ ಪ್ರತಿಯೊಂದು ಕಾರ್ಯವು (ಒಳ್ಳೆಯದು ಅಥವಾ ಕೆಟ್ಟದು), ಎರಡುಗಳನ್ನೂ ಮಾಪನ ಮಾಡುವಾಗ ಇವುಗಳ ಭಾರ ಅಧಿಕವಾಗಿರುತ್ತದೆ.
ಮೊಹರಂ ಏಕೆ ವಿಶೇಷವಾಗಿದೆ?
‘ಆಕಾಶಗಳನ್ನು ಭೂಮಿಯನ್ನು ಸೃಷ್ಟಿಸಿದ ದಿನ (ಮೊದಲ್ಗೊಂಡು) ಅಲ್ಲಾಹನ ಎಣಿಕೆಯ ಅನುಸಾರ ಮಾಸಗಳ ಸಂಖ್ಯೆ ಹನ್ನೆರಡಾಗಿದೆ. ಅವುಗಳ ಪೈಕಿ ನಾಲ್ಕು ಮಾಸಗಳು ಆದರಣೀಯವಾಗಿವೆದರಣೀಯವಾಗಿವೆ. ಇದೇ ಶಾಶ್ವತವಾದ ಧರ್ಮ ನಿಯಮವಾಗಿದೆ. ಆದುದರಿಂದ ಆ ಮಾಸಗಳಲ್ಲಿ ನಿಮಗೆ ನೀವೇ ಅನ್ಯಾಯವೆಸಗಬೇಡಿರಿ. (ಪ. ಕುರಾನ್, 9:36)
ಈ ಶ್ಲೋಕಕ್ಕೆ ಸಂಬಂಧಿಸಿದಂತೆ, ಇಬ್ನ್ ಕದೀರ್ (ರ) ವಿವರಿಸುತ್ತಾರೆ, 'ಅಲ್ಲಾಹನು ತನ್ನ ಸೃಷ್ಟಿಯಿಂದ ಗಣ್ಯರಾಗಿದ್ದವರನ್ನು ಆರಿಸಿಕೊಂಡಿದ್ದಾನೆ: ದೇವದೂತರ ಒಳಗಿಂದ ಅವನು ಸಂದೇಶವಾಹಕರನ್ನು ಆರಿಸಿಕೊಂಡನು, ಮಾನವಕುಲದಿಂದ ಅವನು ಸಂದೇಶವಾಹಕರನ್ನು ಆರಿಸಿಕೊಂಡನು, ವಾಕ್ ಕೌಶಲ್ಯದಿಂದ ಅವನು ತನ್ನ ಸ್ಮರಣೆಯನ್ನು ಆರಿಸಿಕೊಂಡನು (ಝಿಕ್ರ್ / ನಾಮಸ್ಮರಣೆ) ಭೂಮಿಯ ಮೇಲೆ ಇರುವ ಜಾಗಗಳಲ್ಲಿ ಅವನು ಮಸೀದಿಗಳನ್ನು ಆಯ್ಕೆ ಮಾಡಿಕೊಂಡನು, ತಿಂಗಳುಗಳ ಪೈಕಿ ಅವನು ರಂಜಾನ್ ಮತ್ತು ಪವಿತ್ರ ತಿಂಗಳುಗಳನ್ನು ಆಯ್ಕೆ ಮಾಡಿದನು ... ಆದ್ದರಿಂದ, ಅಲ್ಲಾನಿಂದ ಆಯ್ಕೆ ಮಾಡಲ್ಪಟ್ಟದ್ದನ್ನು ಭಕ್ತಿಪೂರ್ವವಾಗಿ ಗೌರವಿಸಿ, ತಿಳುವಳಿಕೆ ಮತ್ತು ಬುದ್ಧಿವಂತಿಕೆ ಉಳ್ಳ ಜನರು ಆತನಿಂದ ಆರಿಸಲ್ಪಟ್ಟದ್ದನ್ನು ಗೌರವಿಸುತ್ತಾರೆ. (ತಫ್ಸೀರ್ ಇಬ್ನ್ ಕದೀರ್). ಆದ್ದರಿಂದ, ಮೊಹರಂ ಮಾಸ ವಿಶೇಷವಾಗಿದೆ ಏಕೆಂದರೆ ಅಲ್ಲಾಹನು ಅದನ್ನು ಆರಿಸಿಕೊಂಡಿದ್ದಾನೆ. ಈ ಪವಿತ್ರ ತಿಂಗಳಲ್ಲಿ ‘ನಮ್ಮನ್ನು ನಾವೇ ಅನ್ಯಾಯ ಮಾಡಿಕೊಳ್ಳಬಾರದು’ ಎಂದು ಅವನು ನಮಗೆ ಆಜ್ಞಾಪಿಸುತ್ತಾನೆ, ಇದರರ್ಥ ನಾವು ಪರಿಶುದ್ಧ ವೈಚಾರಿಕತೆ ಮತ್ತು ನೀತಿವಂತ ನಡವಳಿಕೆಯನ್ನು ಹೊಂದಿದ್ದೇವೆ ಮತ್ತು ಪಾಪಕ್ಕೆ ಬೀಳುವುದಿಲ್ಲ ಎಂದು ಖಚಿತಪಡಿಸಿಕೊಳ್ಳುವುದು.
ನಾಲ್ಕು ಪವಿತ್ರ ತಿಂಗಳುಗಳು ಯಾವುವು?
ಅಲ್ಲಾಹನು ರಮಝಾನ್ ಹೊರತು ಪಡಿಸಿ ಇತರ ನಾಲ್ಕು ಪವಿತ್ರ ಮಾಸಗಳೆಂದರೆ 1)ಮೊಹರಂ 2)ರಜ್ಜಬ್, 3)ದುಲ್-ಖಅದಾ (ಜುಲ್-ಕಾಯ್ದಾ) ಮತ್ತು 4) ದುಲ್-ಹಿಜ್ಜಾ (ಜುಲ್-ಹಜ್ಜ್) ಗಳನ್ನು ಪವಿತ್ರ ತಿಂಗಳುಗಳಾಗಿ ಮಹಾಮಹಿಮ ಅಲ್ಲಾಹನು ಆರಿಸಿಕೊಂಡಿದ್ದಾನೆ.
ಪವಿತ್ರ ಪ್ರವಾಡಿವರ್ಯರ (ಸ) ಕಾಲದ ಐತಿಹಾಸಿಕ ಹಿನ್ನಲೆಯನ್ನ ಅದ್ಧ್ಯಯನ ಮಾಡಿದಾಗ ನಮಗೆ ಕಾಣುವ ವಿಚಾರಗಳು ಎಂದರೆ, ದುಲ್-ಖಅದಾ, ಧುಲ್-ಹಿಜ್ಜಾ ಮತ್ತು ಮುಹರಮ್ ಈ ಮೂರು ಪವಿತ್ರವಾದ ಮಾಸಗಳಲ್ಲಿ ಡಕಾಯಿತರ, ಕಳ್ಳಕಾಕರ ಅಥವಾ ಯುದ್ಧದ ಅಪಾಯಗಳ ಭಯವಿಲ್ಲದೆ ಯಾತ್ರಿಕರು ಸುರಕ್ಷಿತವಾಗಿ ಹಜ್ ಯಾತ್ರೆ ಮಾಡಲು ಅನುಮತಿಸಲಾಗಿತ್ತು. ಅವರು ಹಜ್ ಮಾಡಲು ಪ್ರಯಾಣಿಸುವಾಗ ಧುಲ್-ಖಅದ ಸಮಯದಲ್ಲಿ ಹೋರಾಟ, ಹೊಡೆದಾಟ ಗಳನ್ನು ನಿಷೇಧಿಸಲಾಗಿತ್ತು; ಧುಲ್-ಹಿಜ್ಜಾ ಮಾಸದಲ್ಲಿ ಅವರು ಮಕ್ಕಾ ನಗರ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಜ್ ನಿರ್ವಹಿಸುತ್ತಿರುವಾಗ; ಮತ್ತು ಮೊಹರಂ, ಅವರು ಹಜ್‌ನಿಂದ ಮನೆಗೆ ಹಿಂದಿರುಗುತ್ತಿರುವಾಗ. ಈ ಪದ್ಧತಿ ಅಥವಾ ಮಾನದಂಡವನ್ನು ಇಸ್ಲಾಮಿಕ್ ಪೂರ್ವದಲ್ಲಿ ಅರಬ್ಬರು ಎತ್ತಿಹಿಡಿದಿದ್ದರು ಮತ್ತು ಅಲ್ಲಾಹನು ಇದನ್ನು ತನ್ನ ಕುರಾನ್‌ನಲ್ಲಿ ದೃಢಪಡಿಸುತ್ತಾನೆ. ಇದರ ಮದ್ಯ ರಜ್ಜಬ್ ಎಂಬ ತಿಂಗಳು ಹಿಜ್ರಿ ಕ್ಯಾಲೆಂಡರಿನ ಏಳನೇ ತಿಂಗಳಾಗಿದ್ದು ಇದೂ ಕೂಡ ಒಂದು ಪವಿತ್ರ ಮಾಸವಾಗಿ ನಿಂತಿದೆ. ಐತಿಹಾಸಿಕವಾಗಿ ನೋಡಿದಾಗ, ಜನರು ಬಯಸಿದಲ್ಲಿ ಈ ಮಾಸದಲ್ಲಿ ಉಮ್ರಾ ನಿರ್ವಹಿಸಲು ಅವಕಾಶ ನೀಡುವುದಾಗಿತ್ತು. ಈ ನಾಲ್ಕು ಮಾಸಗಳ ಹೊರತು ರಮಝಾನ್ ಮತ್ತು ಅದರ ವಿಶೇಷತೆಗಳ ಬಗ್ಗೆ ಸಾಮಾನ್ಯ ವಾಗಿ ಎಲ್ಲಾರಿಗೂ ತಿಳಿದಿದೆ ಹಾಗಾಗಿ ರಮಝಾನ್ ಬಗ್ಗೆ ಈ ಬರಹದಲ್ಲಿ ಹೆಚ್ಚು ಬೆಳಕು ಚೆಲ್ಲಲಾಗಿಲ್ಲ.
ಮೊಹರಂನ ಪ್ರಯೋಜನಗಳೇನು?
ನಮ್ಮಲ್ಲಿ ಅನೇಕರು ರಂಜಾನ್ ತಿಂಗಳ ಮಹತ್ವವನ್ನು ಅರ್ಥಮಾಡಿಕೊಂಡಿದ್ದರೂ, ಸಾಮಾನ್ಯವಾಗಿ ಮೇಲೆ ಹೇಳಲಾದ ನಾಲ್ಕು ಪವಿತ್ರ ತಿಂಗಳುಗಳನ್ನು ನಿರ್ಲಕ್ಷಿಸಿದ್ದೇವೆ. ಆದಾಗ್ಯೂ ಕೂಡ ಈ ಮಾಸಗಳು ನಮಗೆ ಅಲ್ಲಾಹನ ಕರುಣೆ ಮತ್ತು ಅನುಗ್ರಹವನ್ನು ಪಡೆಯಲು ಅವಕಾಶಗಳ ಕಲ್ಪಿಸುತ್ತವ, ಈ ನಾಲ್ಕು ಪವಿತ್ರ ತಿಂಗಳುಗಳಲ್ಲಿ ಅಲ್ಲಾಹನಿಗೆ ಹತ್ತಿರವಾಗಲು ಉತ್ತಮ ಸಮಯವೆಂದು ಅಲ್ಲಾಹನೇ ನಿರ್ದಿಷ್ಟವಾಗಿ ಆಯ್ಕೆಮಾಡಿದ್ದಾನೆ.
ಮೊದಲೇ ಹೇಳಿದಂತೆ, ಕಾಬಾ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಮ್ಮ ಕಾರ್ಯಗಳು ಹೆಚ್ಚು ಭಾರವನ್ನು ಹೊಂದಿರುತ್ತವೆ ಅಂದರೆ ಅಲ್ಲಿ ಮಾಡುವ ಪಾಪಕ್ಕೆ ಹೆಚ್ಚಿನ ಶಿಕ್ಷೆ ಇದ್ದರೆ ಅಲ್ಲಿ ಮಾಡುವ ಪುಣ್ಯಕ್ಕೆ ಹೆಚ್ಚಿನ ಪ್ರತಿಫಲ ಇದ್ದೆ ಇರುತ್ತದೆ ಎಂಬ ನಂಬಿಕೆ, ಆದರೆ ನಮ್ಮ ಕೆಟ್ಟ ಕಾರ್ಯಗಳಿಂದ ಹೆಚ್ಚು ಪಾಪಗಳನ್ನು ಗಳಿಸುವ ಅಪಾಯವೂ ಇರುವುದರಿಂದಲೇ ಅಲ್ಲಾಹನು ನಿಮ್ಮ ಮೇಲೆ ನೀವೇ ಅನ್ಯಾಯ ಮಾಡಿಕೊಳ್ಳಬೇಡಿ ಎಂದು ಆಜ್ಞಾಪಿಸುತ್ತಾನೆ. ಇದರರ್ಥ ನಮ್ಮ ಸಂಬಂಧಗಳಲ್ಲಿ, ಕೆಲಸದಲ್ಲಿ, ನಮ್ಮ ಪ್ರಾರ್ಥನೆಯಲ್ಲಿ, ನಮ್ಮ ಸಮಯ ನಿರ್ವಹಣೆಯಲ್ಲಿ ನಾವು ಹೇಗೆ ವರ್ತಿಸುತ್ತೇವೆ ಎಂದರ್ಥ ಅದಲ್ಲದೆ ನಮ್ಮ ಆರೋಗ್ಯವನ್ನು ನಾವು ಹೇಗೆ ಕಾಳಜಿ ವಹಿಸುತ್ತೇವೆ, ನಾವು ದುಶ್ಚಟಕ್ಕೆ ಬಲಿಯಾಗಿ ನಮ್ಮ ಆರೋಗ್ಯ ಹೇಗೆ ಹಾಳು ಮಾಡಿಕೊಟ್ಟುತ್ತಿದ್ದೇವೆ ಎಂಬುದರ ಕುರಿತು ನಾವು ಹೆಚ್ಚು ಜಾಗರೂಕರಾಗಿರಬೇಕು. ಪವಿತ್ರವಾದ ಉದ್ದೇಶದಿಂದ ಮಾಡುವ ಪ್ರತಿಯೊಂದು ಕ್ರಿಯೆಯು ಉತ್ತಮ ಪ್ರತಿಫಲಕ್ಕೆ ಅವಕಾಶವಾಗಬಹುದು!
ಮೊಹರಂನಲ್ಲಿ ದೈವ ಕೃಪೆಯ ಲಾಭವನ್ನು ಪಡೆಯಲು ಸುಲಭವಾದ ಮಾರ್ಗಗಳ ಕಿರು ಪಟ್ಟಿಯನ್ನು ಇಲ್ಲಿ ಕೊಡಲಾಗಿದೆ:
ಹೆಚ್ಚು ಹೆಚ್ಚು ಅಲ್ಲಾಹನ ನಾಮ ಸ್ಮರಣೆ ಮಾಡುವುದು.
ಹೆಚ್ಚು ಎಚ್ಚು ದರೂದ್-ಸಲಾಂ ಹೇಳುವುದು! (ಇದು ಪ್ರವಾದಿ (ಸ) ಮತ್ತು ಸ್ವರ್ಗದ ಜನರಿಗೆ ತಿಳಿಸುವ ಶುಭಾಶಯವಾಗಿದೆ, ಮತ್ತು ಅಂತಹ ಸರಳ ಕ್ರಿಯೆಯು ಅಸಂಖ್ಯಾತ ಪ್ರತಿಫಲಗಳ ಆಗರವಾಗಿದೆ ಮತ್ತು
ಅಲ್ಲಾಹನಲ್ಲಿ ನಮ್ಮ ಪಾಪಗಳ ಕ್ಷಮೆಯನ್ನು ಯಾಚಿಸುವುದು.
ಎಲ್ಲರನ್ನೂ ನೋಡಿ (ಸೋಮವಾರ ಬೆಳಿಗ್ಗೆಯೂ ಸಹ) ಮುಗುಳ್ ನಗುತ್ತಿರಿ. ಈ ಸರಳ ಕ್ರಿಯೆಯು ಇಡೀ ವರ್ಷತುಂಬಾ ನಾವು ಪಾಲಿಸಲೇಬೇಕು ಆದರೆ ಮೊಹರಂ ಸಮಯದಲ್ಲಿ ಅಲ್ಲಾಹನಿಗೆ ಹೆಚ್ಚು ಖುಷಿ ಪಡಿಸುತ್ತದೆ.
ನಿಯಮಿತವಾಗಿ ಸದಾಕಾ (ನಿಯಮಿತ ಸ್ವಯಂ ಪ್ರೇರಿತ ದಾನ) ನೀಡುವುದು.
ಆರೋಗ್ಯ ಸುಧಾರಿಸಿಕೊಳ್ಳುವುದು - ಮೊಹರಂ ಇಸ್ಲಾಮಿಕ್ ಹೊಸ ವರ್ಷದ ಆರಂಭವಾಗಿದೆ, ಆದ್ದರಿಂದ ನೀವು ವರ್ಷಪೂರ್ತಿ ದೈವೀ ಪ್ರತಿಫಲವನ್ನು ಪಡೆದುಕೊಳ್ಳುವ ಸಂಕಲ್ಪಗಳನ್ನು ಮಾಡಲು ಮತ್ತು ಉತ್ತಮ ಅಭ್ಯಾಸ ಹವ್ಯಾಸಗಳನ್ನು ರೂಡಿಸಿಕೊಳ್ಳಲು(ಸ್ಥಾಪಿಸಲು) ಇದು ಪರಿಪಕ್ವ ಸಮಯವಾಗಿದೆ.
ಉಪವಾಸ ಆಚರಣೆ - ನಿರ್ದೇಶಿತ ಉಪವಾಸಗಳ ಹಾಗೂ ಉತ್ತಮ ಆಹಾರ ಸೇವನೆಯ ರೂಡಿ, ಹೆಚ್ಚು ದೈಹಿಕ ಶ್ರಮ ಮಾಡುವ ಮೂಲಕ, ಆರೋಗ್ಯಕರ ನಿದ್ರೆಯ ದಿನಚರಿಯನ್ನು ಹೊಂದುವ ಮೂಲಕ ನಮ್ಮ ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದು. ಹೌದು, ನಮ್ಮ ಆರೋಗ್ಯವನ್ನು ನೋಡಿಕೊಳ್ಳುವುದು ಕೂಡ ಅಲ್ಲಾಹನ ದೃಷ್ಟಿಯಲ್ಲಿ ಒಂದು ಪ್ರಾರ್ಥನೆ ಯಾಗಿದೆ ಅಥವಾ ಪ್ರತಿಫಲದಾಯಕ ಕ್ರಿಯೆಯಾಗಿದೆ
ನಮ್ಮ ದೇಹವು ನಮ್ಮದಲ್ಲ ಅಲ್ಲಾಹನ ಅಮಾನತ್ (ಅವನು ಕೊಟ್ಟ ಸಾಲ) ವಾಗಿದೆ!
ಮೊಹರಂ ಪ್ರಯುಕ್ತ ಹೊಸವರ್ಷದ ಹೊಸ ನಿರ್ಧಾರಗಳು, ಸ್ವಯಂ ಜೀವನಶೈಲಿಯ ಕೆಲವು ಬದಲಾವಣೆಗಳನ್ನು ಮಾಡುವ ಠರಾವುಗಳು ಮಾಡಿಕೊಂಡು ಜೀವನವನ್ನು ಬದಲಾಯಿಸಿಕೊಳ್ಳಿ ಅಲ್ಲಾಹನ ಮಾರ್ಗದರ್ಶನ ಖಂಡಿತ ಸಾಧ್ಯ. ಇದರಿಂದ ನೀವು ಲೆಕ್ಕವಿಲ್ಲದಷ್ಟು ಪ್ರತಿಫಲಗಳನ್ನು ಅಲ್ಲಾಹನಿಂದ ಗಳಿಸಬಹುದು.
ಇತರರ ಮೇಲೆ ನಾವು ಅನ್ಯಾಯ ವ್ಯಸಗಿದ್ದಲ್ಲಿ ಅವರ ಕುರಿತು ಕ್ಷಮೆಯನ್ನು ಕೇಳುವುದು. ಮೊಹರಂನಲ್ಲಿ ಪಾಪಗಳು ಹೆಚ್ಚು ಭಾರವಾಗಿರುವುದರಿಂದ(ಅದಕ್ಕೆ ಹೆಚ್ಚಿನ ಶಿಕ್ಷೆ ಇರುತ್ತದೆ), ಈ ತಿಂಗಳಲ್ಲಿ ನೀವು ಸಾಧ್ಯವಾದಷ್ಟು ಹೆಚ್ಚು-ಹೆಚ್ಚಾಗಿ ಜನರ ಕುರಿತು, ಅಲ್ಲಾಹನಕುರಿತು ಕ್ಷಮೆಆಚಿಸುವುದು ಅಥವಾ ಬಡವರಿಗೆ ಸಹಾಯ, ಹಸಿದವರಿಗೆ ಊಟ, ಬಾಯಾರಿದವರಿಗೆ ನೀರು, ಪಾನಕ, ತಂಪು - ಪಾನೀಯಗಳನ್ನು ನೀಡುವ ಮೂಲಕ ನಮ್ಮ ಪಾಪಗಳನ್ನು ಅಳಿಸಿಹಾಕಬೇಕು, ಇದು ಮಹಾನ್ ಸದಾಕಾ ಏ ಜರಿಯಾ ಆಗಿ ಪರಿಣಮಿಸಬಹುದು.
ಹೆಚ್ಚು - ಹೆಚ್ಚು ಖುರಾನ್ ಓದಿರಿ, ಅರ್ಥೈಸಿಕೊಳ್ಳಿ, ಪಾಲಿಸಿ ಮತ್ತು ಇತರರಿಗೆ ಇದರ ಪಾಠ ನೀಡಿ. ಈ ತಿಂಗಳಲ್ಲಿ ಅಲ್ಲಾಹನಿಗೆ ಹತ್ತಿರವಾಗಲು ಇದು ಪರಿಪೂರ್ಣ ಮಾರ್ಗವಾಗಿದೆ! ಇದನ್ನು ಮಾಡಲು ದಿನಕ್ಕೆ ಕೇವಲ 10-15 ನಿಮಿಷಗಳು; ನಾವೇ ಸಮಯವನ್ನು ಹೊಂದಿಸಿ ಕೊಂಡು ಮತ್ತು ಶಿಸ್ತುಬದ್ಧರಾಗಿ! ಆಶಾದಾಯಕವಾಗಿ, ಈ ಉತ್ತಮ ಅಭ್ಯಾಸ/ಹವ್ಯಾಸವನ್ನು ಸ್ಥಾಪಿಸಿದರೆ ಈ ಹೊಸ ವರ್ಷದ ನಿರ್ಣಯಕ್ಕೆ ಗಟ್ಟಿಯಾಗಿ ಅಂಟಿಕೊಳ್ಳುಲು ಅನುವಾಗುತ್ತದೆ.
ನಿಜವಾಗಿಯೂ ಈ ಎಲ್ಲ ಕ್ರಿಯೆಗಳು ಮೊಹರಂಗೆ ಸೀಮಿತವಾಗಿಲ್ಲ, ಆದರೆ ಅವುಗಳನ್ನು ಹೆಚ್ಚು ಶಿಫಾರಸ್ಸು ಮಾಡಲಾಗಿದ್ದು ವರ್ಷದ ಮೊದಲ ತಿಂಗಳಾಗಿದ್ದರಿಂದ ಮತ್ತು ಈ ಕೃಪಾಪೂರ್ವಕ ತಿಂಗಳಲ್ಲಿ ಅವುಗಳನ್ನು ಹೆಚ್ಚಿಸುವುದು ಅರ್ಥಪೂರ್ಣವಾಗಿದೆ, ಕಾರಣ ಮೇಲೆ ಹೇಳಿದ ಪವಿತ್ರ ಕುರಾನಿನ ಆಜ್ಞೆ ಯಾಗಿದೆ!
ಮೊಹರಂ ಸಮಯದಲ್ಲಿ ಕೆಲವು ಶಿಫಾರಸು ಕ್ರಮಗಳು ಅಥವಾ ಸುನ್ನತ್ ಯಾವುವು?
ಮೊಹರಂ ಸಮಯದಲ್ಲಿ (ಇಡೀ ತಿಂಗಳ ಉಪವಾಸವನ್ನು ರಂಜಾನ್‌ಗೆ ಮಾತ್ರ ಮೀಸಲಿಟ್ಟಿದ್ದರೂ) ಸಾಧ್ಯವಾದಷ್ಟು ಉಪವಾಸ ಮಾಡಲು ಹೆಚ್ಚು ಶಿಫಾರಸು ಮಾಡಲಾಗಿದೆ. ಅಲ್ಲಾಹನ ಸಂದೇಶವಾಹಕರು (ಸ) ಹೇಳಿದರು, 'ರಂಜಾನ್ ನಂತರದ ಅತ್ಯುತ್ತಮ ಉಪವಾಸವು ಅಲ್ಲಾಹನ ಪವಿತ್ರ ತಿಂಗಳಾದ ಮುಹರ್ರಂ ನಲ್ಲಿ...' (ಮುಸ್ಲಿಂ ಎಂಬ ಹದೀಸ್ ಸಂಗ್ರಹಣೆಯಿಂದ ಆಯ್ಕೆ)
ವಾಸ್ತವವಾಗಿ, ಮುಹರ್ರಂನ ಪವಿತ್ರತೆಯು ಅದೆಷ್ಠಿದೆ ಎಂದರೆ, ಜಾಹಿಲಿಯಾ (ಅಜ್ಞಾನ) ದಿನಗಳಲ್ಲಿ ಖುರೈಷಿಗಳು ಸಹ ಈ ತಿಂಗಳ ಕೆಲವು ದಿನಗಳಲ್ಲಿ ಉಪವಾಸ ಮಾಡುತ್ತಿದ್ದರು. ಅಂತಹ ಒಂದು ದಿನವು ಅಶುರಾ ದಿನವಾಗಿದೆ (ಮೊಹರಂನ 10 ನೇ ದಿನ), ಇದು ಅಲ್ಲಾಹನು ಪ್ರವಾದಿ ಮೂಸಾ (ಅ) ಮತ್ತು ಅವರ ಜನರನ್ನು ಫೇರೋನ ಬಂಧನದಿಂದ ಮುಕ್ತಗೊಳಿಸುವುದನ್ನು ಆಚರಿಸುತ್ತದೆ: ಪ್ರಯುಕ್ತ ಅಲ್ಲಾನ ಪವಿತ್ರ ಪ್ರವಾದಿಯ ಆದೇಶದ ಮೇರೆಗೆಮುಸ್ಲಿಮರು ಕನಿಷ್ಠ ಎರಡು ದಿನ ಉಪವಾಸವನ್ನು ಆಚರಿಸುವುದು ಕಡ್ಡಾಯವಾಗಿದೆ ಅದು ಹೇಗೆಂದರೆ ಮೊಹರಂನ ಹತ್ತನೇ ದಿನ ಕಡ್ಡಾಯವಾಗಿ ಮಾಡಲೇಬೇಕು ಅದರ ಜೊತೆಗೆ 9ನೇ ದಿನ ಅಥವಾ 11ನೇ ದಿನ ಎರಡರಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಂಡು ಉಪವಾಸ ಮಾಡಬಹುದಾಗಿದೆ.
ಅಲ್ಲಾಹನ ಸಂದೇಶವಾಹಕರು (ಸ) ಅಶುರಾ ದಿನದ ಉಪವಾಸವು ಕಳೆದ ವರ್ಷದ ಸಣ್ಣ ಪಾಪಗಳನ್ನು ಪರಿಹರಿಸುತ್ತದೆ (ಮುಸ್ಲಿಂ) ಎಂದು ಹೇಳಿದರು. ಆದ್ದರಿಂದ, ಈ ದಿನದಂದು ಉಪವಾಸ ಮಾಡಲು ಹೆಚ್ಚು ಶಿಫಾರಸು ಮಾಡಲಾಗಿದೆ.
ಪ್ರವಾದಿ (ಸ) ಅವರು ತಮ್ಮ ಉಮ್ಮಾ ಮತ್ತು ಇತರ ಪುಸ್ತಕದ ಜನರ ನಡುವೆ ವ್ಯತ್ಯಾಸವನ್ನು ತೋರಿಸಲು ಮೊಹರಂನ 9 ಮತ್ತು / ಅಥವಾ 11 ರಂದು ಉಪವಾಸ ಮಾಡಲು ನಮಗೆ ಸಲಹೆ ನೀಡಿದರು ಮತ್ತು ನಮಗೆ ತಿಳಿದಿರುವಂತೆ, ಅವರ ಸುನ್ನತ್ ಅನ್ನು ಅನುಸರಿಸುವುದು ಅಪಾರವಾದ ದೈವ ಕೃಪೆಯನ್ನು ತರುತ್ತದೆ. ಈ ಅದ್ಭುತ ದಿನದ ಬಗ್ಗೆ, ಅದರ ಇತಿಹಾಸದಿಂದ ಅದರ ಹಲವಾರು ಲಾಭಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು 'ಅಶುರಾ ದಿನದ ಕುರಿತು ಇನ್ನೊಂದು ಬ್ಲಾಗ್ ಪೋಸ್ಟ್ ಅನ್ನು ಅತೀ ಶೀಘ್ರದಲ್ಲಿ ಬರೆಯಲಾಗುವುದು.
ಮೊಹರಂ ಸಮಯದಲ್ಲಿ ನಾನು ನನ್ನ ಝಕಾತ್ ನೀಡಬಹುದೇ?
ಮೊಹರಂನಲ್ಲಿ ನಮ್ಮ ಝಕಾತ್ ಪಾವತಿಸಲು ಯಾವುದೇ ನಿರ್ದಿಷ್ಟ ಶಿಫಾರಸು ಇಲ್ಲ, ಆದರೇ, ಪ್ರವಾದಿ (ಸ) ರವರ ಕಾಲದಲ್ಲಿ, ಅಲ್ಲಾಹನು ಮೆಚ್ಚಿದ ಈ ಪವಿತ್ರ ತಿಂಗಳಾದ ಮೊಹರಂ ನ ಒಂದನೇ ತಾರೀಕಿನಂದು ಝಕಾತನ್ನು ಸಂಗ್ರಹಿಕೊಳ್ಳಲಾಗುತ್ತಿತ್ತು.
ನಮ್ಮ ಝಕಾತ್ ಅನ್ನು ಇಡೀ ವರ್ಷತುಂಬೆಲ್ಲ ಪಾವತಿಸಲೂ ಕೂಡಾ ಅವಕಾಶವಿದೆ, ಹೀಗೆ ಬಯಸಿದರೆ ನಾವೂ ಮೊದಲು ನಮ್ಮ ಝಕಾತ್ ಅನ್ನು ಸರಿಯಾಗಿ ಲೆಕ್ಕ ಹಾಕಿ ಅದನ್ನು ಹನ್ನೆರಡರಿಂದ ಭಾಗಿಸಿಕೊಳ್ಳಬೇಕು. ಈ ವರ್ಷದಿಂದಲೇ ಪ್ರತಿತಿಂಗಳು ಬರುವ ಮಾಸಿಕ ಭಾಗವನ್ನು ನಾವು ಬಡವರಿಗೆ, ದೀನರಿಗೆ, ದಲಿತರಿಗೆ, ಅನಾಥ ಮಕ್ಕಳಿಗೆ, ವಿದುವೆಯರಿಗೆ ಹಾಗೂ ವಿಶೇಷವಾಗಿ ಶೈಕ್ಷಣಿಕ ಉದ್ದೇಶಕ್ಕಾಗಿ ಧನ ಸಹಾಯವನ್ನು ಮಾಡಬಹುದಾಗಿದೆ.
ಅನಾಥರ ಹಾಗೂ ಕಡುಬಡವರ ಮೂಲಭೂತ ಅವಶ್ಯತೆಗಳನ್ನು ನಮ್ಮ ಝಕಾತ್ ದಿಂದ ಪ್ರಾಯೋಜಿಸುವ ನಿಟ್ಟಿನಲ್ಲಿ ನಾವು ಇಂತಹ ಕಡುಬಡವರ ಮಕ್ಕಳ ಶಾಲಾ ಜವಾಬ್ದಾರಿಯನ್ನು ಹೊತ್ತುಕೊಳ್ಳಬಹುದು. ಈ ಮಾಸಿಕ ಪಾವತಿಗಳಿಂದ ಅವರ ಸಾಮಾಜಿಕ ರಕ್ಷಣೆಯನ್ನು ಮಾಡಬಹುದು. ಯಾವುದಾದರೂ ಬಡ ಮತ್ತು ಅನಾಥ ಮಗುವನ್ನು ನೀವು ಕಿಫಾಲಾ ಪಡೆದುಕೊಳ್ಳಲು ಬಯಸಿದಲ್ಲಿ ನಮ್ಮ ಸಂಸ್ಥೆಗೆ ಸಂಪರ್ಕಿಸಬಹುದು ನಂತರ ಅದರ ಸಂಪೂರ್ಣ ಜವಾಬ್ದಾರಿಯನ್ನು ಪಡೆದು ಸದರಿ ಮಗುವಿನ ಸಂಪೂರ್ಣ ಶೈಕ್ಷಣಿಕ ಹಾಗೂ ಇತರೆ ಖರ್ಚನ್ನು ತೆಗೆದುಕೊಂಡು ನೇರವಾಗಿ ನಮ್ಮ ಶಾಲಾ ಆಡಳಿತಕ್ಕೆ ವರ್ಗಾಯಿಸಬಹುದು. (Rainbow Trust, ಎಂಬ ಹೆಸರಿನ ವಿದ್ಯಾಸಂಸ್ಥೆಯು, ವಿಜಯಪುರ ಜಿಲ್ಲೆಯ ತಾಳಿಕೋಟೆ ಎಂಬ ಪಟ್ಟಣದಲ್ಲಿ, ಶೈಕ್ಷಣಿಕ ಹಾಗೂ ಇತರ ಸಾಮಾಜಿಕ ಕಳಕಳಿಯನ್ನು ಒಳಗೊಂಡ, ವಿಶೇಷವಾಗಿ ಬಡವರ, ದೀನದಲಿತರ, ವಿಧುವೆಯರ, ವಿಚ್ಛೇದಿತೆಯರ ಹಾಗೂಅನಾಥ ಮಕ್ಕಳ ವಿದ್ಯಾಭ್ಯಾಸದ ಕುರಿತು ವಿಶೇಷ ಚಿಂತನೆಯೊಂದಿಗೆ ಆರಂಭಿಸಲ್ಪಟ್ಟ ಸಂಸ್ಥೆಯಾಗಿದ್ದು ದಾನಿಗಳು ಈ ಕೆಳಗಿನ ದೂರವಾಣಿ ಸಂಖ್ಯೆಯ ಮೂಲಕ ನಮ್ಮನ್ನು ಸಂಪರ್ಕಿಸಬಹುದು.
ಹೀಗೆ ಮಾಡಲು ಬಯಸಿದರೆ ನಾವೂ ನಮ್ಮ ಮಕ್ಕಳೊಂದಿಗೆ ಮತ್ತೇ ಒಂದೋ ಎರಡೋ ಬಡ ಮಕ್ಕಳನ್ನು ಉತ್ತಮ ಭವಿಷ್ಯಕ್ಕೆ ಕೊಂಡೊಯ್ಯ ಬಹುದು. ಹೀಗೆ ನಮ್ಮ ಶ್ರೀರಕ್ಷೆಯಲ್ಲಿ ಪಡೆದ ಮಗುವಿನ ಜೀವನವನ್ನು ನಾವು ಸಂಪೂರ್ಣವಾಗಿ ಪರಿವರ್ತಿಸಬಹುದು! ನೀವು ಹೀಗೆ ಮಾಡಲು ಬಯಸಿದಲ್ಲಿ ನಮ್ಮ ಸಂಸ್ಥೆಗೆ ಸಂಪರ್ಕಿಸಿದರೆ ನಮ್ಮ ಕಡೆಯಿಂದ ಸಂಪೂರ್ಣ ಬೆಂಬಲ ಹಾಗೂ ಮಾರ್ಗದರ್ಶನವನ್ನು ನಿಮಗೆ ನೀಡಲಾಗುವುದು.
ಮುಸಲ್ಮಾನರ ಕೈಯಲ್ಲಿರುವ ಈ ಝಕಾತ್ ಮತ್ತು ಇತರ ದಾನಗಳ ಶಸ್ತ್ರಾಸ್ತ್ರಗಳು ಸಾಮಾಜಿಕ ಪಿಡುಗುಗಳ ವಿರುದ್ಧ ಹೋರಾಡಲು ಅಲ್ಲಾಹನು ನಮಗೆ ದಯಪಾಲಿಸಿದ್ದಾನೆ ಆದರೆ ನಾವು ಅದನ್ನು ಸದುಪಯೋಗ ಪಡಿಸಿಕೊಳ್ಳುವ ಶರತ್ತು ಇದೆ. ನಮ್ಮ ಸಂಸ್ಥೆಯಲ್ಲಿ ನಾವು ಹಾಕಿಕೊಂಡ ಹೆಚ್ಚಿನ ಯೋಜನೆಗಳು ಜಕಾತ್ ಗೆ ಅರ್ಹವಾಗಿವೆ, ನಮ್ಮ ಈ ಮನವಿ ಮತ್ತು ಅಭಿಯಾನಗಳಿಂದ ಬಡತನವನ್ನು ನಿರ್ಮೂಲನೆ ಮಾಡುವ ನಮ್ಮ ದೀರ್ಘಾವಧಿಯ ಕೆಲಸದವರೆಗೆ. ಯಾವ ಯೋಜನೆಗೆ ಕೊಡುಗೆ ನೀಡಬೇಕೆಂದು ನಿಮಗೆ ನಿರ್ಧರಿಸಲು ನೀವು ನಮ್ಮ ಸಂಸ್ಥೆಗೆ ಸಂಪರ್ಕಿಸಿ, ಹೀಗೆ ನಿರ್ಧಾರ ಕೈಕೊಳ್ಳಲು ಅಸಾಧ್ಯವಾದರೆ ನೀವು ನಮ್ಮ ಝಕಾತ್ ನಿಧಿಗೆ ಸಹ ನೇರವಾಗಿ ಧನ ಸಹಾಯವನ್ನು ನೀಡಬಹುದು. ನಮ್ಮಲ್ಲಿರುವ ತಜ್ಞರು ಅದನ್ನು ಹೆಚ್ಚು ಅಗತ್ಯವಿರುವ ಕಡೆಯಲ್ಲಿ ನಿಯೋಜಿಸುತ್ತಾರೆ. ತಮ್ಮ ಹಣದ ಒಂದೊಂದು ರೂಪಾಯಿಯ ಲೆಕ್ಕವನ್ನು ತಮಗೆ ನೀಡಲಾಗುವುದು.
ಪ್ರವಾದಿ (ಸ) ವರ್ಯರ ನಂತರದಲ್ಲಿ ನಡೆದ ಮೋಹರಂ ತಿಂಗಳಿನ ಘಟನಾವಳಿಗಳು.
ಪ್ರವಾದಿ(ಸ) ರವರ ನಂತರ 4 ಪ್ರಮುಖ ಖಲೀಫಾ (ರ. ಅ) ರವರು ಗಳು ಸತ್ಯ ವಿಶ್ವಾಸಿಗಳನ್ನು ಒಗ್ಗೂಡಿಸಿ ಇಸ್ಲಾಮಿನ ಐಕ್ಯತೆ ಮತ್ತು ನ್ಯಾಯ ಸ್ಥಾಪನೆಗಾಗಿ ಸೆಣಸಿದರು. ಆದರೆ ಕೊನೆಯ ಮುಖ್ಯ ಖಲೀಫಾ (ರ. ಅ.) ರವರ ಮಕ್ಕಳು ಹಾಗೂ ಸಮಸ್ತ ಕುಟುಂಬವನ್ನೇ ಕೊಂಡು ಹಾಕಿದ ಅಮಾನವೀಯ ಘಟನೆಯ ಬಗ್ಗೆ ಪ್ರತ್ಯೇಕ ಬರಹವನ್ನು ನೀಡಲಾಗುವುದು.
✍ ನಿಮ್ಮ ಪ್ರೀತಿಯ
ಎಂ.ಕೆ. ಮೇತ್ರಿ, ವಕೀಲರು.
ದೂ.ಸಂ. 9739-459-677.