Parens Patriae ಅಂದರೆ Parent of the Nation / ದೇಶಪಾಲಕರು, ಅಂದರೆ ಯಾರು?
Parens Patriae ಇದೊಂದು Latin ಭಾಷೆಯ ಶಬ್ದವಾಗಿದ್ದು ಇದರ ಅರ್ಥ ದೇಶದ ಪಾಲಕರು ಅಥವಾ ರಾಷ್ಟ್ರದ ಮಾತಾ-ಪಿತಾ ಎಂದರ್ಥ, ಹೇಗೆ ಒಂದು ಮಗುವಿನ ರಕ್ಷಣೆಯು ಪಾಲಕರ ಹೊಣೆಯೋ, ಅದೇ ರೀತಿ ಪ್ರತಿಯೊಬ್ಬ ನಾಗರಿಕನ ರಕ್ಷಣೆಯೂ ಅವನನ್ನು ಆಳುವ ಸರಕಾರದ ಹೊಣೆಯಾಗಿದೆ, ಯಾವಾಗ ಸರಕಾರಗಳು ಬೇಜವಾಬ್ದಾರಿ ಯಾಗಿ ಕುಡುಕ ತಂದೆಯತರವೋ ಅಥವಾ ದಾರಿತಪ್ಪಿದತಾಯಿಯಂತೆಯೋ ವರ್ತಿಸುತ್ತಾ ಸ್ವಂತ ಮಕ್ಕಳನ್ನು ಬೀದಿಗೆ ಬಿಟ್ಟು, ಕೇವಲ ತಮ್ಮ ಸ್ವಾರ್ಥಕ್ಕಾಗಿ ಬದುಕಲು ಆರಂಭಿಸುತ್ತವೆಯೋ ಆಗ ಇಡೀ ರಾಷ್ಟ್ರಕ್ಕೆ ನೈಜ ತಂದೆ-ತಾಯಿಯಂತೆ ಇರುವ, ಸಾಂವಿಧಾನಿಕ ಪಾಲಕರ ಸ್ಥಾನಹೊಂದಿದ ನ್ಯಾಯಾಲಯವು ಸರಕಾರಗಳಿಗೆ ಚಾಟಿ ಏಟು ಬೀಸುವ ಕೆಲಸ ಮಾಡಬೇಕು, ಅದನ್ನೇ ಲ್ಯಾಟಿನ್ ಭಾಷೆಯಲ್ಲಿ ಈ ಮೇಲಿನ ಶಬ್ದಗಳನ್ನು ಬಳಸಿ ಹೇಳಲಾಗಿದೆ, ಅದಲ್ಲದೇ ಈ ಸಿದ್ಧಾಂತದ ಆಧಾರದ ಮೇಲೆಯೇ ವಿವಿಧ ಸಿದ್ಧಾಂತಗಳು ಹುಟ್ಟಿಕೊಂಡಿವೆ. ಉದಾ: Judicial Independence, Judicial Supremacy, Doctrine of Judicial Review, Doctrine of Eclipse/ Severability and Waiver, ಅಷ್ಟೇ ಅಲ್ಲದೇ ಒಕ್ಕೂಟ ವ್ಯವಸ್ಥೆಯಲ್ಲಿ ಒಕ್ಕೂಟದ ಸರಕಾರವು ರಾಜ್ಯ ಸರಕಾರಗಳ ಅಧಿಕಾರಗಳನ್ನು ಕಸಿಯದಂತೆ ಕಾಯುತ್ತಿರುವ Doctrine of Pith and Substance ಹಾಗೂ Doctrine of Colorable Legislation, ಇವೆಲ್ಲವೂ ನ್ಯಾಯಾಂಗದ ಶ್ರೇಷ್ಠತೆಯ ಯಶೋಗಾಥೆಗಳು.
ಈ ನಿಟ್ಟಿನಲ್ಲಿ ಮೇಲಿನ ಸಿದ್ದಾಂತಗಳನ್ನು ಪ್ರತಿಪಾದಿಸುವ ಅದೆಷ್ಟೋ ಉಚ್ಛ ಹಾಗೂ ಸರ್ವೋಚ್ಚ ನ್ಯಾಯಾಲಯದ ತೀರ್ಪುಗಳು ಬಂದಿವೆ. ಇವತ್ತು ನಾನು ಈ ಸಿದ್ಧಾಂತದ ಬಗ್ಗೆ ಬರೆಯಲು ಮೂಲ ಕಾರಣ ನಾವು ನೋಡುತ್ತಿರುವ ಪ್ರಕಾರ ಪಂಜಾಬ್ ರಾಜ್ಯದಲ್ಲಿ ಹೊಸದಾಗಿ ಭುಗಿಲೆದ್ದಿರುವ ದೇಶ ಒಡೆಯುವ ಹುನ್ನಾರ, “ಖಾಲ್ಸಾ ರಾಜ್” ಎಂಬ ಹೊಸದಾಗಿ ದೇಶವನ್ನು ಇಬ್ಭಾಗ ಮಾಡಲು ಹೊರಟಿರುವ ಒಂದು ಪ್ರಯತ್ನ ಸಿಖ್ಖರು ತಮ್ಮ ಧರ್ಮದ ಪ್ರಕಾರ ಸಿಖ್ ರಾಷ್ಟ್ರವನ್ನು ಕೇಳುತ್ತಿರುವುದು ಸಂವಿಧಾನದ ವಿರುದ್ಧದ ನಡೆ ಎಂಬುದರಲ್ಲಿ ಬೇರೆ ಮಾತಿಲ್ಲ ಆದರೆ ಅದರ ಹಿಂದೆ ಅಡಗಿರುವ ಮರ್ಮವನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡಿದರೆ ಇದಕ್ಕೆ ಮೂಲ ಕಾರಣ ಅವರನ್ನು ಒತ್ತಾಯಪೂರ್ವಕವಾಗಿ ಹಿಂದುಗಳು ಎಂದು ಘೋಷಿಸುವ ಪ್ರಯತ್ನ, ಈ ದೇಶದಲ್ಲಿ ಮೊದಲಿನಿಂದಲೇ ನಡೆಯುತ್ತಾ ಬಂದಿದೆ ಸಿಖ್ ಧರ್ಮವು ಆರಂಭವಾದಾಗಿನಿಂದಲೂ ಅವರ ಧರ್ಮ ಗುರುಗಳು ಖಡಾ-ಖಂಡಿತವಾಗಿ ತಮ್ಮ ಸಿದ್ದಾಂತಗಳನ್ನು ಮಂಡಿಸುತ್ತಾ ಬಂದಿದ್ದಾರೆ ಅವರು ನೇರವಾಗಿ ಹೇಳುವುದು ಇಷ್ಟೇ ಅವರು ಹಿಂದುಗಳೂ ಅಲ್ಲ ಮುಸ್ಲಿಮರೂ ಅಲ್ಲ ತಮ್ಮದೇ ಆದ ಧರ್ಮಗ್ರಂಥ (ಗ್ರಂಥ ಸಾಹೇಬ್) ಹಾಗೂ ಅವರ ಧರ್ಮ ಗುರುವಿನ ಬೋಧನೆಯ ಪ್ರಕಾರ ಸಕಲ ವೈಶಿಷ್ಟ್ಯಗಳನ್ನು ಹೊಂದಿರುವಂತಹ ಒಂದು ಸ್ವತಂತ್ರವಾದ ಧರ್ಮವನ್ನು ಅವರು ಪಾಲಿಸುತ್ತಾ ಬಂದಿದ್ದಾರೆ. ಅವರ ಮೇಲೆ ಮೊದಲು ಇಸ್ಲಾಂ ಅನ್ನು ನಂತರ ಹಿಂದುತ್ವವನ್ನು ಒತ್ತಾಯ ಪೂರ್ವಕವಾಗಿ ಹೇರುವ ಕೆಲಸ ಎಲ್ಲ ಸರಕಾರಗಳು ಕಾಲಕಾಲಕ್ಕೆ ಮಾಡುತ್ತಾ ಬಂದಿವೆ. ಇಂತಹ ರಾಜ ಪ್ರೇರಿತ ದುಷ್ಕೃತ್ಯಗಳ ವಿರುದ್ಧವಾಗಿ ತಮ್ಮ ಧರ್ಮ, ಸಂಸ್ಕೃತಿ ಹಾಗೂ ಸ್ವತಂತ್ರ್ಯದ ರಕ್ಷಣೆಗಾಗಿ ಆಯಾ ಸರಕಾರಗಳ ವಿರುದ್ಧ ಖಡ್ಗ ಎತ್ತುವ ಕೆಲಸವನ್ನು ಸಿಖ್ಖರು ನಿರ್ದಾಕ್ಷಣ್ಯವಾಗಿ ಮಾಡುತ್ತಲೇ ಬಂದಿದ್ದಾರೆ. ಇವತ್ತಿನ ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಇದಕ್ಕೆ ಮೂಲ ಕಾರಣವೆಂದರೆ ಯಥೇಚ್ಛವಾಗಿ ಬೆಳೆಯುತ್ತಿರುವಂತಹ ಹಿಂದುತ್ವದ ಹೆಸರಿನಲ್ಲಿ ನಡೆಯುತ್ತಿರುವ ಅಸಂವಿಧಾನಿಕ ಹಾಗೂ ದೇಶವಿರೋಧಿ ಚಟುವಟಿಕೆಗಳು ಈ ದೇಶವನ್ನು ಸಕಲ ವೈಚಾರಿಕತೆ ಹಾಗೂ ವೈಜ್ಞಾನಿಕ ತಳಹದಿಯ ಮೇಲೆ ಪ್ರಬುದ್ಧ ಭಾರತವನ್ನು ಕಟ್ಟುವ ಕೆಲಸವನ್ನು ಬಿಟ್ಟು ಸರಕಾರದಲ್ಲಿ ಕುಳಿತಿರುವ ಕೆಲವು ಪಟ್ಟಭದ್ರ ಹಿತಾಸಕ್ತಿಯ ರಾಜಕಾರಣಿಗಳು ಹಾಗೂ ಪಟ್ಟಭದ್ರ ವಿಚಾರಧಾರೆಯ ಸಂಘಟನೆಗಳು ಈ ದೇಶವನ್ನು ಹಿಂದುರಾಷ್ಟ್ರ ಮಾಡುತ್ತೇವೆ ಎಂದು ಓಡಾಡುತ್ತಿರುವ ವ್ಯರ್ಥ ಪ್ರಯತ್ನದಿಂದಾಗಿ ಇತರೇ ಧರ್ಮದ ಜನರುಗಳು ಈ ವಿಷಪೂರಿತ ವಾತಾವರಣದ ತೋಳತೆಕ್ಕೆಗೆ ಬರದೇ ತಮ್ಮ-ತಮ್ಮ ಧರ್ಮ ಹಾಗೂ ಸಂಸ್ಕೃತಿಗಳ ರಕ್ಷಣೆಯ ನೆಪದಲ್ಲಿ ಇದೇ ರೀತಿ ಎಲ್ಲರೂ ಕೂಡ ಬೇರೆ-ಬೇರೆ ರಾಷ್ಟ್ರಗಳನ್ನು ಬಯಸಿದರೆ ಈಗಾಗಲೇ ಹತ್ತಾರು ಬಾರಿ ಒಡೆದು ಹೋದ ನಮ್ಮ ಜಂಬೂದ್ವೀಪದ ಭಾರತ ಮತ್ತೊಮ್ಮೆ ವಿಭಜನೆಗೆ ಒಳಗಾಗುವುದು ನೈಜ ಭಾರತಿಯರಿಗೆ ಇಷ್ಟವಿಲ್ಲ ಹಾಗಾಗಿ ಇವತ್ತು ಪ್ರತಿಯೊಬ್ಬ ಭಾರತೀಯನೂ ಕೂಡ ಈ ರೀತಿ ದೇಶ ಒಡೆಯುತ್ತಿರುವ ದುಷ್ಟ ಸಂಘಟನೆಗಳ ವಿರುದ್ಧ ಧ್ವನಿಎತ್ತುವ ಹಾಗೂ ಅವರ ವ್ಯರ್ಥ ಪ್ರಯತ್ನವನ್ನು ಹೊಸಕಿಹಾಕುವ ಸಂವಿಧಾನಿಕ ಹಾಗೂ ಕಾನೂನಾತ್ಮಕ ಪರಿಧಿಯಲ್ಲಿ ಇದ್ದುಕೊಂಡು ಹೋರಾಡುವ ರಾಷ್ಟ್ರಪ್ರೇಮಿಗಳನ್ನು ಸೃಷ್ಟಿಸುವ ಕೆಲಸ ನಾವುನೀವೆಲ್ಲರೂ ಸೇರಿ ಮಾಡಬೇಕಾಗಿದೆ.
ಪಾಲಕರಂತೆ ವರ್ತಿಸಬೇಕಾದಂತಹ ಸರಕಾರಗಳು ಇವತ್ತು ಶತ್ರುಗಳಂತೆ ನಾಗರಿಕರ ಮಧ್ಯವಿವಿಧ ರೀತಿಯ ಕಂದಕಗಳನ್ನು ಸೃಷ್ಟಿಸಿ ದೇಶದ ಘನತೆ, ಗೌರವ ಹಾಗೂ ಐಕ್ಯತೆಯನ್ನು ಹೊಡೆದು ಹಾಕುವ ಕೆಲಸ ಮಾಡುತ್ತೇವೆ. ಅದಲ್ಲದೆ ನಾಗರಿಕರ ಮಧ್ಯ ಜಗಳ ಹಚ್ಚಿವಿಶ್ವಮಟ್ಟದಲ್ಲಿ ಸಮಸ್ತ ಭಾರತದ ಅಸ್ಮಿತೆಯನ್ನು ಹಾಳು ಮಾಡುತ್ತಿವೆ. ದೇಶ ವಿರೋಧಿ ಚಟುವಟಿಕೆಗಳು ಸರ್ಕಾರದ ಕೃಪಾಕಟಾಕ್ಷದ ಅಡಿಯಲ್ಲಿ ನಡೆದಿದ್ದು ಅಂತಹ ಸಮಾಜ ಹಾಗೂ ದೇಶ ಘಾತುಕ ಚಟುವಟಿಕೆಗಳನ್ನು ಸರಕಾರದಲ್ಲಿ ಕುಳಿತಿರುವಂತಹ ಕೆಲವು ವ್ಯಕ್ತಿಗಳು ಹಾಗೂ ಸಂಘಟನೆಗಳು ಪೋಷಿಸುತ್ತಿರುವುದು ನಿಜವಾದ ಅರ್ಥದಲ್ಲಿ ಪ್ರಜಾಪ್ರಭುತ್ವದ ಖಗ್ಗೊಲೆಯಾಗಿದೆ.
ಒಂದು ಸಮಾಜವನ್ನು ಇನ್ನೊಂದು ಸಮಾಜದ ಮೇಲೆ ಎತ್ತಿಕಟ್ಟಿ ಜೊತೆಗೆ ನಿಂತ ಸಮುದಾಯವನ್ನ ಅದಕ್ಕೆ ತಿಳಿಯದಂತೆ ನಿರ್ನಾಮಮಾಡುವ ವಿಷಜಂತುಗಳು ಬಹುಹಿಂದಿನಿಂದ ಈ ದೇಶದಲ್ಲಿ ಬದುಕುತ್ತಿವೆ. ಅದರಂತೆಯೇ ಅವುಗಳ ವಿರುದ್ಧ ಹೋರಾಟದ ಪ್ರಯತ್ನಗಳು ಸತತ ಇದೇಮಣ್ಣಿನಲ್ಲಿ ನಡೆಯುತ್ತಿವೆ. ಇವತ್ತು ದೇಶವನ್ನು ಒಗ್ಗೂಡಿಸುವ ಹಾಗೂ ನಾಗರಿಕರನ್ನು ಒಂದೇಕಡೆ ತರುವ ವೈಚಾರಿಕ ಮನೋಭಾವನೆಯ ಜನರು ಮೊದಲು ಒಂದುಕಡೆ ಬರಲೇಬೇಕಾದ ಅನಿವಾರ್ಯತೆ ಬಂದೊದಗಿದೆ. ಈ ದೇಶದ ಐಕ್ಯತೆಗೆ ದುಡಿಯುವ ಜನರನ್ನು ಪರಸ್ಪರ ಸಂಶಿಸುವಹಾಗೆ ಮಾಡಿ ಅವರಲ್ಲಿಯೂ ಕಂದಕಗಳನ್ನು ಸೃಷ್ಟಿಮಾಡಿ, ಒಂದು ತಂಡವನ್ನು ರಾಜಪಿತೂರಿಯ ಅಡಿಯಲ್ಲಿ ಸುಳ್ಳು ಆರೋಪಗಳನ್ನು ಹೊರಿಸಿ ಅಭಿಯೋಜನೆಗೆ ಗುರಿಪಡಿಸಿ, ಇನ್ನೊಂದು ತಂಡವನ್ನು ಅದರಿಂದ ದೂರಮಾಡುವ ಹುನ್ನಾರ ಎಲ್ಲರಿಗೂ ತಿಳಿದಿರುವ ವಿಚಾರ, ಈಗ ಯಾರು ಏನೇ ಹೇಳಲಿ ಇಡೀ ವಿಶ್ವವನ್ನು ಭಾರತದ ಪಾದದಡಿ ತರುವ ಕೆಲಸ ಮಾಡಲು ಮೊಟ್ಟಮೊದಲು ನಾವು ಟೊಂಕಕಟ್ಟಿ ನಿಲ್ಲಬೇಕಾಗಿದೆ, ನಮಗೆ ಯಾರು ಏನೇ ಆಪಾದನೆ ಮಾಡಲಿ ನಾವು ದೇಶದ ನಿಸ್ವಾರ್ಥ ಪ್ರೇಮಿಗಳು ಎಂಬುದನ್ನು ಮರೆಯದೇ ಸ್ವಾರ್ಥಿಗಳನ್ನ ಮಟ್ಟಹಾಕಿ ದೇಶವನ್ನು ಕುತಂತ್ರಿಗಳಿಂದ ರಕ್ಷಿಸಬೇಕಾಗಿದೆ.
ಇಡೀ ವಿಶ್ವ ಆರಂಭವಾಗಿದ್ದು ಭಾರತದಿಂದ ವಿಶ್ವಕ್ಕೆ ತಂದೆ ಭಾರತ, ಆದರೆ ಭಾರತೀಯರಾದ ನಾವು ನಮ್ಮ ಪೂರ್ವಜರನ್ನು ಅರ್ಥಮಾಡಿಕೊಳ್ಳದೆ ಅವರ ಶತ್ರುಗಳ ಬೆನ್ನಿಗೆ ನಿಂತಿದ್ದು ವಿಪರ್ಯಾಸ. ಬುದ್ಧ, ಬಸವ, ಕುವೆಂಪುರವರಾದಿ ಮಹಾಪುರುಷ/ಮಹಿಳೆಯರ ವೈಚಾರಿಕತೆಯನ್ನು ಅರಿಯದೇ ವಿಶೇಷವಾಗಿ ಆಧುನಿಕ ಭಾರತಕ್ಕೆ ಹೊಸ ಜನ್ಮ ನೀಡಿದ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕನಸಿನ ಪ್ರಬುದ್ಧ ಭಾರತವನ್ನು ಕಟ್ಟುವ ಕೆಲಸ ಮಾಡದೇ ಮಲಗಿಕೊಂಡಿರುವ ಕಾರಣ ಇವತ್ತು ಸಮಾಜಬಾಹಿರ ಶಕ್ತಿಗಳು ತಮ್ಮ ಅನುಕೂಲಕ್ಕೆ ತಕ್ಕ ಭಾರತವನ್ನು ಕಟ್ಟಲು ಹವಣಿಸುತ್ತಿವೆ. ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎಂಬ ಸಿದ್ಧಾಂತದ ಮೇಲೆ ಇಡೀ ವಿಶ್ವಕ್ಕೆ ಮಾದರಿಯಾಗುವ ಪ್ರಬುದ್ಧ ಕಟ್ಟುವ ಕನಸು ಪ್ರತಿಯೊಬ್ಬ ಭಾರತೀಯನಲ್ಲಿ ಹುಟ್ಟಿಹಾಕುವ ಪ್ರಯತ್ನ ನಡೆಯಲಿ ಎಂದು ಹಾರೈಸುತ್ತಾ. ಜೈ ಭೀಮ್, ಜೈ ಭಾರತ್, ಜೈ SDPI.
✍️ ಎಂ.ಕೆ. ಮೇತ್ರಿ,
ವಕೀಲರೂ & ರಾಜ್ಯ ಮುಖಂಡರು, SDPI ಕರ್ನಾಟಕ.